BGS

BGS CENTRAL SCHOOL

BGS Central School > Achievements > ಪ್ರಧಾನಿ “ಮನ್ ಕೀ ಬಾತ್‌ನಲಿ” ಬಿಜಿಎಸ್ ಕೇಂದ್ರೀಯ ವಿದ್ಯಾಲಯ, ಮಿರ್ಜಾನ್, ಕುಮಟಾದ ಕೀರ್ತಿ ಹೆಗಡೆ

ಪ್ರಧಾನಿ “ಮನ್ ಕೀ ಬಾತ್‌ನಲಿ” ಬಿಜಿಎಸ್ ಕೇಂದ್ರೀಯ ವಿದ್ಯಾಲಯ, ಮಿರ್ಜಾನ್, ಕುಮಟಾದ ಕೀರ್ತಿ ಹೆಗಡೆ

ಪ್ರಧಾನಮಂತ್ರಿ ನರೇಂದ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಬಿಜಿಎಸ್ ಕೇಂದ್ರೀಯ ವಿದ್ಯಾಲಯ(ಮಿರ್ಜಾನ್, ಕುಮಟಾ)ದ ಹತ್ತನೇ ತರಗತಿಯ ವಿದ್ಯಾರ್ಥಿನಿ, ಕೀರ್ತಿ ಹೆಗಡೆ ಹೆಸರು ಪ್ರಸ್ತಾಪವಾಗಿದ್ದು, ಆ ಮೂಲಕ ಇದು ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಹಾಗೂ ಉತ್ತರಕನ್ನಡ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿ ಹೊರಹೊಮ್ಮಿದೆ.

ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಬಿಜಿಎಸ್ ಕೇಂದ್ರೀಯ ವಿದ್ಯಾಲಯ ಮಿರ್ಜಾನ್ ಕುಮಟಾದ ಕೀರ್ತಿ ಹೆಗಡೆ ಪತ್ರವನ್ನು ತಮ್ಮ ೩೮ ನೇ ಮನ್ ಕೀ ಬಾತ್‌ನಲ್ಲಿ ಪ್ರಸ್ತಾಪಿಸಿದ ಪ್ರಧಾನಮಂತ್ರಿ ನರೇಂದ ಮೋದಿ ಮಕ್ಕಳ ಚಿಂತನೆಯಂತೆ ನಾವು ಪರಿಸರದ ಬಗ್ಗೆ ಹೆಚ್ಚು ತಿಳಿಸುವ ಅಗತ್ಯವಿದೆ. ಎಂದು ಅಭಿಪ್ರಾಯಪಟ್ಟರು.

ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಬಿಜಿಎಸ್ ಕೇಂದ್ರೀಯ ವಿದ್ಯಾಲಯ (ಮಿರ್ಜಾನ್, ಕುಮಟಾ)ದ ಹತ್ತನೇ ತರಗತಿಯ ವಿದ್ಯಾರ್ಥಿನಿ ಕೀರ್ತಿ ಹೆಗಡೆ ಬರೆದಿರುವ ಪತ್ರದಲ್ಲಿ ಡಿಜಿಟಲ್ ಇಂಡಿಯಾ, ಸ್ಮಾರ್ಟ್‌ಸಿಟಿ ಆಲೋಚನೆಗಳು ನನಗೆ ಬಲು ಇಷ್ಟ. ಆದರೆ ಓರ್ವ ವಿದ್ಯಾರ್ಥಿನಿಯಾಗಿ ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ಭಾರತದ ಶಿಕ್ಷಣ ಪದ್ದತಿಯನ್ನು  ತುರ್ತಾಗಿ ಸುಧಾರಿಸಬೇಕಿದೆ. ತುಂಬಾ ವರ್ಷಗಳಿಂದ ಚಲಾವಣೆಯಲ್ಲಿರುವ ಪುಸ್ತಕಗಳ ಓದು ಹೆಚ್ಚಿನ ವಿದ್ಯಾರ್ಥಿಗಳಿಗೆ ಆಸಕ್ತಿದಾಯಕವಾಗಿಲ್ಲ. ನಾಲ್ಕು ಗೋಡೆ ಮಧ್ಯೆ ಓದಿಗಿಂತ ಪರಿಸರದ ಮಧ್ಯೆ ಓದು ಇದ್ದರೆ ಅದೆಷ್ಟು ಚೆನ್ನಾಗಿರುತ್ತಿತ್ತು. ಇದು ಮಕ್ಕಳಲ್ಲಿ ಪರಿಸರ ಪ್ರೀತಿ, ಓದಿನ ವ್ಯಾಮೋಹ ಹಾಗೂ ಹೊರಜಗತ್ತಿನ ಕುರಿತು ಕುತೂಹಲ ಮೂಡಿಸುತ್ತಿತ್ತು. ಇಂತಹ ವ್ಯವಸ್ಥೆ ಬರಲಿ ಎಂಬುದೇ ನನ್ನ ಕನಸು ಎಂದಿದ್ದರು.

ಪ್ರಧಾನಮಂತ್ರಿ ನರೇಂದ ಮೋದಿ ಮನ್ ಕೀ ಬಾತ್‌ನಲ್ಲಿ ಮೊಟ್ಟಮೊದಲು ಕೀರ್ತಿ ಹೆಗಡೆ ಯ ಪತ್ರವನ್ನು ಪ್ರಸ್ತಾಪಿಸಿ ಡಿಜಿಟಲ್ ಇಂಡಿಯಾ, ಸ್ಮಾರ್ಟ್‌ಸಿಟಿಯ ಬಗ್ಗೆ ಆಕೆ ವ್ಯಕ್ತಪಡಿಸಿದ ಅಭಿಪ್ರಾಯ ಹಾಗೂ ಈಗಿನ ಓದು ಪರಿಸರದ ನಡುವೆ ಇದ್ದರೆ ಎಷ್ಟು ಚನ್ನಾಗಿರುತ್ತಿತ್ತು ಎಂದು ಹೇಳಿರುವುದನ್ನು ತಮ್ಮ ಬಾಷಣದಲ್ಲಿ ತಿಳಿಸಿದರಲ್ಲದೇ ಕೀರ್ತಿ ಹೆಗಡೆಯ ಕನಸಿನಂತೆ ನಮ್ಮ ಪರಿಸರ ಮತ್ತು ಅದರ ಕಾಳಜಿ ಹಾಗೂ ಈ ಪರಿಸರದಲ್ಲಿಯೇ ಓದುವಂತಾದರೆ ಹೇಗೆ ಎನ್ನುವುದನ್ನು ನಾವೆಲ್ಲಾ ಪರಿಗಣಿಸಬೇಕಾಗಿದೆ ಎಂದರು.

modi modi1

Keerti…You made us proud not only our school, Our Sri Adichunchanagiri Trust as well our Uttara Kannada district and state.

Hearty Congratulations for your success.
 By- President, Secretary, Management, Principal, Staff members & Students.